ಕ.com ಯೂಟ್ಯೂಬ್ ಚಾನಲ್

ಮೈಸೂರಿನ ಡಾ.ಉಮಾ ಮಧುಸೂದಾನಗೆ ಅಮೆರಿಕಾದಲ್ಲಿ ವಿಶಿಷ್ಟವಾದ ಕೃತಜ್ಞತೆ

ಕೋವಿಡ್‌ – 19 ಕೊರೊನಾ ವಾರಿಯರ್‌ ಆಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ವೈದ್ಯೆಯೊಬ್ಬರಿಗೆ ಅಮೆರಿಕಾದ ದಕ್ಷಿಣ ಪ್ರಾಂತ್ಯದಲ್ಲಿ ವಿಶಿಷ್ಟವಾಗಿ ಕೃತಜ್ಞತೆ ಸಲ್ಲಿಕೆಯಾಗಿದೆ. ಕೋವಿಡ್‌ 19 ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಯಾವ ಬಿರುದು ನೀಡಿದರೂ ಕಡಿಮೆಯೇ. ಇದರ ಗೌರವಾರ್ಥ ಸೋಮವಾರ ಡಾ.ಉಮಾ ಮಧುಸೂದಾನ ಅವರಿಗೆ ‘ಡ್ರೈವ್‌ ಆಫ್‌ ಆನರ್‌’ ಗೌರವ ಸಲ್ಲಿಕೆ ಮಾಡಲಾಯಿತು. ನೂರಕ್ಕೂ ಹೆಚ್ಚು ವಾಹನಗಳು (ಪೋಲೀಸ್ ಗಾಡಿ, ಆಂಬ್ಯುಲೆನ್ಸ್, ಫೈಯರ್ ಎಂಜಿನ್, ಕಾರ್) ಡಾ.ಉಮಾ ಮಧುಸೂದಾನ ಮನೆಯ ಮುಂದೆ ಬಂದು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವ ದೃಶವನ್ನು ನೀವು ವೀಡಿಯೋದಲ್ಲಿ ನೋಡಬಹುದು.

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close