ಕ.com ಯೂಟ್ಯೂಬ್ ಚಾನಲ್

ಅವನೇ ಶ್ರೀಮನ್ನಾರಾಯಣ ಚಲನಚಿತ್ರದ ಎಲ್ಲ ಹಾಡುಗಳ ಸಾಹಿತ್ಯ

ಹ್ಯಾಂಡ್ಸ್ ಅಪ್ ಹಾಡಿನ ಸಾಹಿತ್ಯ

ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ
ನಾಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ ತೀರ ಹಠ
ಗುರಿ ಬೆನ್ನಟ್ಟೋ ನೇತಾರನು

ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು

ಹ್ಯಾಂಡ್ಸ್ ಅಪ್ ಅದು ಅನವರತ
ಹ್ಯಾಂಡ್ಸ್ ಅಪ್ ನಾ ಅಜ್ಞಾತ
ಹ್ಯಾಂಡ್ಸ್ ಅಪ್ ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೋ ಅವತಾರ

ರಂಗೇರಿದೆ ಮಾಯಾ ಜಾಲ
ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ
ನಿಂದನು ಓರ್ವ ರಾಕ್ಷಸ
ತಪ್ಪಲ್ಲ ಆದರು ಅದುವೇ
ಊಹೆಗೂ ಮೀರಿದ ಸಾಹಸ
ಅನಿಸುತ್ತೆ ಬಂದ ಹಾಗಿದೆ ರಚಿಸಲು ಹೊಸದೇ ಶಾಸನ
ಮೆರಯಲಿ ಗಗನದಲಿ ನಿಮ್ಮದೇ ಲಾಂಛನ
ಯುಧ್ಧ ಮಾಡಬೇಕು ಓಡಬಾರದು
ಕಟುಕರ ಮುಂದೆ ಭಗವದ್ಗೀತೆ
ಇದು ಚರಿತ್ರೆ ಸೃಷ್ಟಿಸೋ ಅವತಾರ

ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ
ನಾಕು ದಿಕ್ಕಿನಲು ಬೇಕಿವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ ತೀರ ಹಠ
ಗುರಿ ಬೆನ್ನಟ್ಟೋ ನೇತಾರನು

ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನ ಹೆಸರು

ಹ್ಯಾಂಡ್ಸ್ ಅಪ್ ಅದು ಅನವರತ
ಹ್ಯಾಂಡ್ಸ್ ಅಪ್ ನೀ ಅಜ್ಞಾತ
ಹ್ಯಾಂಡ್ಸ್ ಅಪ್ ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೋ ಅವತಾರ

ನಾರಾಯಣ ನಾರಾಯಣ ಹಾಡಿನ ಸಾಹಿತ್ಯ

ಆಹಾ ಬಂದನು ಭಗವಂತನ ಬರ್ಶನು
ಕಣ್ಣಿಗೆ ರೇಬನು ಯಾಕಿನ್ನು
ಜಗದೋದ್ಧಾರ ಸುಕುಮಾರಾ
ನಮಗೆಂದೆ ಬಂದ ಸರದಾರಾ
ನಿನ್ನ ಒರಿಜಿನಲ್ ಮೊಗವ ನೋಡಣಾ

ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ನಾರಾಯಣ

ಶಂಖ ಚಕ್ರ ಗದೆ ಹೇಳು ಸ್ವಾಮಿ ‌‌‍ಎಲ್ಲಿದೆ‍, ಆಹಾ
ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌‍ಎಲ್ಲಿದೆ‍
ಕೈಜೋಡಿಸಿ ದೇವ್ರನ್ನ ಡೌಟ್ಯಾಕೆ ಕೇಳಣ
ಯಾಕಪ್ಪಾ ಬಂದೂಕು ಬೇರಿಜರ್ಫಿಲ್ಲು ಬಾಣ
ಕುಂಕುಮ ಹಣೆಗೆ ತಾಕಿ
ಆಗಿದೆ ಜಯದ ತಿಲಕ
ಒಲಿದಿದೆ, ಖಳೆಯಿದೆ, ಚಾರ್ಮಿಂಗು ನಿನ್ನ ಮುಖ
ಜಗದೋದ್ಧಾರ ಸುಕುಮಾರ
ನೀನೆ ಎಲ್ಲಾ ಲೋಕದ ಪ್ರಕಾರ
ನೀ ಬರುವ ಬಾಗಿಲಿಗೆ ತೋರಣ

ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ನಾರಾಯಣ
ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ನಾರಾಯಣ

ಅಂದದ, ಬ್ಯೂಟಿಫುಲ್
ಲಕುಮಿಗೇ, ಶೀ ಇಸ್ ಸೊ ಕೂಲ್
ಜರೂಗಿದೇ ಒಲವಿನ ದೇಣಿಗೆ
ಮನಸಾರೆ ಓ ಮನಸಾರೆ ಮನಸಾರೆ
ಧ್ರುವತಾರೆ ಓ ಧ್ರುವತಾರೆ ಧ್ರುವತಾರೆ
ಬೆಳಕಾಗಿ ಬಂದಿದೆ ಜೋಡಿಗೆ
ರಾಜಮಾನದಿ ಕೇಳಿಬಂದಿದೆ ವೈಭೋಗದ ಗಾನ
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ

ಜಗದೋದ್ಧಾರ ಸುಕುಮಾರ
ಲಕುಮಿಯಾ ಸಿರಿ ಸರದಾರಾ
ಸ್ವರ್ಗದಲೇ ಆಗಿಹುದೂ ಕಲ್ಯಾಣಾ

ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ಲಕ್ಶ್ಮೀ ನಾರಾಯಣ
ನಾರಾಯಣ ನಾರಾಯಣ
ಶ್ರೀ ಮನ್ನಾರಾಯಣ ಲಕ್ಶ್ಮೀ ನಾರಾಯಣ

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close