ಕ.com ಯೂಟ್ಯೂಬ್ ಚಾನಲ್

ಲವ್ ಮಾಕ್‌ಟೇಲ್ ಚಲನಚಿತ್ರದ ಎಲ್ಲ ಹಾಡುಗಳ ಸಾಹಿತ್ಯ

ಲವ್ ಯು ಚಿನ್ನ

ನನ್ನಲ್ಲೇ ನೀನೂ ನಿನ್ನಲ್ಲೇ ನಾನು
ಸುಮಧುರ ಈ ಸಂಗಮಾ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರಾ ಸಂಭ್ರಮಾ
ನನಗೆ ಇನ್ನೂ ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮಾ

ಮೋಡಿಯ ಮಾಡೋ ಜಾದೂಗಾರ
ಸಲುಗೆ ತೋರೋ ಸಾಹುಕಾರ
ಹೃದಯ ನೀನೇ ಕದ್ದ ಚೋರ
ಮನಸು ಕಾಡೋ ಮಾಯಗಾರ
ಹಿತಕರ ಸಡಗರ ನಿನ್ನ ಜೊತೆ ಪ್ರಿಯಕರ
ನೀನಿರೆ ಎಲ್ಲ ಸುಖ
ಲವ್ ಯು ಚಿನ್ನ
ಲವ್ ಯು ಕಂದ
ನನಗಿಷ್ಟ ನೀ
ಲವ್ ಯು ಚಿನ್ನ

ಒಂದೇ ಒಂದು ನಿಮಿಷ
ನಾ ದೂರ ಇರೆನು ಒಲವೇ
ಯಾಕಾದರೂ ಹೀಗೇ
ನೀ ನನ್ನನು ಸೆಳೆವೆe
ಏನೇ ಹೇಳು ಕೊಡುವೆ
ನಿನ್ನ ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ
ನಿನಗೆಂದಿಗೂ ನಾನಿರುವೆ
ಜೊತೆಯಿರಲು ನಿನ್ನ
ಮುಡುಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ
ಲವ್ ಯು ಕಂದ
ಲವ್ ಯು ಚಿನ್ನ
ನನಗಿಷ್ಟ ನೀ
ಲವ್ ಯು ಕಂದ

ಲವ್ ಆಗೋಯ್ತಲ್ಲ

ಅಯ್ಯಯ್ಯೋ ಚೇಂಜ್ ಆಗ್ಹೊಯ್ತು ನನ್ನ ಜೀವನ
ಗೊತ್ತಾ ಈ ಸಡನ್ ಚೇಂಜ್-ಗೆ ನೀನೆ ಕಾರಣ
ಬೇಡ್ಲಿಲ್ಲ ನಾನಂತೂ ದೇವ್ರ್ಹತ್ರಾ ಇವಳನ್ನ
ಅವನಾಗೇ ಕೊಟ್ಟ ಇಂಥ ಹೈ ಕ್ಲಾಸ್ ಬ್ಯೂಟೀ-ನಾ
ನಿನ್ನಿಂದ ನನ್ನ ರೇಂಜು ಜಾಸ್ತಿಯಾಗಿದೆ
ಡವ ಡವ ಡವ ನನ್ನ ಹಾರ್ಟ್-ಉ ಹುಚ್ಚ್ ಹಿಡ್ದಂಗ್ ಬಡ್ದಾಡಿದೆ
ಇಲ್ದೆಇರೋ ಮೀಸೆ ತಿರುಗಿಸೊ ಆಸೆಯಾಗಿದೆ
ಏನೋ ಒಂಥರ ಹೊಸ ಫೀಲಿಂಗ್ ಸಖತ್ತಾಗಿದೆ.

ಒ ಓ ಲವ್ ಆಗ್ಹೋಯ್ತಲ್ಲ
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ
ಒ ಓ ಲವ್ ಆಗ್ಹೋಯ್ತಲ್ಲ
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸ್-ಉ ಚೆಲ್ಲಿ
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ

ಹೇಗಂತ ಹೇಳಿಕೊಳ್ಳೋದು ನನ್ನ ಲಕ್ಕನ್ನ
ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ
ನೀ ಸಿಕ್ಕ ಸೊಕ್ಕಲೇ ಮರೆತೆ ನಾನು ನನ್ನ ಲೋಕಾನಾ
ಯಾಕೋ ಡೌಟ್-ಉ ನನ್ನನು ನೀನು ಒಪ್ಪಿದ್ ನಿಜಾನಾ
ಎಷ್ಟೋ ಹುಡುಗೀರ ಹಿಂದೆ ಬಿದ್ದು ಅಲೆದೆ ನಾ
ನೋಡ್ಲಿಲ್ಲ ಒಬ್ಳೂ ಕೂಡ ತಿರುಗಿ ಫೇಸು ಕಟ್ಟನ್ನ
ಭಗವಂತನ ಮೇಲೆನೇ ನಂಗ್ಯಾಕೊ ಅನುಮಾನ
ನೀನಾಗೆ ಇಷ್ಟ ಪಟ್ಟೆ ಹೇಗೆ ನನ್ನನಾ

ಒ ಓ ಲವ್ ಆಗ್ಹೋಯ್ತಲ್ಲ
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ
ಒ ಓ ಲವ್ ಆಗ್ಹೋಯ್ತಲ್ಲ
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸ್-ಉ ಚೆಲ್ಲಿ
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ

ನಿನ್ ಹಿಂದೆ ಬೀಳ್ಳಿಲ್ಲ, ಲವ್ ಮಾಡು ಅನ್ಲಿಲ್ಲ
ಸಿಂಪಲ್ಲಾಗ್ ಇದ್ನಲ್ಲೆ ನಾನು
ಹಿಂದ್ಮುಂದೆ ನೋಡ್ದೇನೆ, ಬಡಪಾಯಿ ಪ್ರೇಮಿನೇ
ಒಪ್ಕೊಂಡೆ ಬಿಟ್ಯಲ್ಲೆ ನೀನು
ಕೈಯಲ್ಲಿ ಕೈ ಇಟ್ಟ, ಆ ಫಸ್ಟು ಟಚ್ಚಲ್ಲೆ
ಹೊಡ್ದಂಗೆ ಆಯ್ತಲ್ಲೆ ಶಾಕು
ಮುಟ್ಟೋದು ನಿನ್ನನ್ನ, ಮುಟ್ದಂಗೆ ಮಿಂಚನ್ನ
ನಂದಲ್ಲ ನಿಂದೆ ಮಿಸ್ಟೇಕು
ಅಂಗೈಲಿ ಅಪ್ಸರೇ ಸಿಕ್ಬಿಟ್ಟ ಹಾಗಿದೆ
ಅದೃಷ್ಟವೇ ಬಂದು ಎದೆಯ ಬಾಗಿಲು ಬಡಿದಿದೆ‌
ಅಂದವಾದ ಅಚ್ಚರಿ ನನ್ ಕಣ್ಮುಂದೆ ನಿಂತಿದೆ
ಸಿಂಪಲ್ಲಾಗ್ ಇದ್ದ ಲೈಫು ಈಗ್ ಎಕ್ಕುಟ್ಟ್ ಹೋಗಿದೆ

ಒ ಓ ಲವ್ ಆಗ್ಹೋಯ್ತಲ್ಲ
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ
ಒ ಓ ಲವ್ ಆಗ್ಹೋಯ್ತಲ್
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸ್-ಉ ಚೆಲ್ಲಿ
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ

ಕಣ್ಣ ಹನಿಯೊಂದು

ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ
ಎದೆಯೊಳಗೆ
ಸಣ್ಣ ಸನ್ನೇ ನೀಡದೇ
ನೋವು ತುಂಬಿ ತೂರಿದೆ
ವಿಧಿಯೇ ಯಾವುದೀ ಹಣೆಬರಹ

ಚಿಗುರೊಡೆದ ಪ್ರೀತಿಗೆ ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ ಚಿವುಟಿದೆ
ಸೋಂಕಿರುವ ಕಾಲವೇ ತಡಮಾಡು ನಿನ್ನನೇ
ಚಿಗುತಿರಲು ಇನ್ನೂ ಕನಸಿವೆ
ಆಸೆಯೂ ತೀರದೆ ಆಸರೆ ಕಾಣದೆ
ದಿನಗಳು ಸಾಗದೆ ನಿಂತಲೇ ನಿಂತಿವೆ
ಕಾಣದ ಕಡಲಿಗೆ ಕನಸಿವು ಜಾರಿದೆ

ನನ್ನದೆಲ್ಲ ನಾಳೆಗೆ ನಾ ಮಾಡಲಾರೆನೇ ನೀನಿಲ್ಲದ ಕಲ್ಪನೆ
ಕಾಪಾಡೋ ದೇವರೇ ಕೈಬಿಟ್ಟು ಹೋದರೇ
ನಾನೇನು ಮಾಡಬಲ್ಲೆನೇ
ಕನಲಿದ ದಿನಗಳು ನಿಂತರೂ ಕೂತರೂ
ಕುಸಿಯುವ ಭಾವನೆ ಎಲ್ಲಿಯೇ ಹೋದರೂ
ಭಯದಲೇ ಸಾಗುವೆ ಸಾವಿನ ಅಂಚಿಗೆ

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close