ಕ.com ಯೂಟ್ಯೂಬ್ ಚಾನಲ್

ಒಡೆಯ ಚಲನಚಿತ್ರದ ಎಲ್ಲ ಹಾಡುಗಳ ಸಾಹಿತ್ಯ

ಒಡೆಯ

ಸಿಡಿಲಿವನು ದಾರಿ ಬಿಡಿ
ಗುಡುಗು ಇವನು
ನೀ ದೂರ ನಡಿ
ಭಯವಾದರೆ ಊರು ಬಿಡಿ
ಬಂದಿದೆ ಬೆಂಕಿ ಕಿಡಿ

ಹೇಯ್ ಒಡೆಯ ಬಾ ಒಡೆಯ

ಅಸ್ತ್ರಗಳ ಕೆಳಗೆ ಇಡಿ
ಆಡ್ ಬಿದ್ದು ನೀ ದಂಡ ಹೊಡಿ
ನಡುಕಾನ ನೀರು ಕುಡಿ
ಇವನ ನೆರಳು ಪಡಿ
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ

ಹೇಯ್ ಒಡೆಯ ಬಾ ಒಡೆಯ

ಕೂಸು ಹುಟ್ಟಿದಾಗ
ಇವನ ಹೆಸರೇ ಇಡುವರು ಇಲ್ಲಿ
ಇವನ ಮಾತೆ ಅಂತ್ಯ, ನಮ್ಮ ಊರಲಿ
ಒಹ್ ಹೋ ಮಚ್ಚು ಕೂಡ
ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ
ನೋಡೋ ಉರಿಯೋ ಸೂರ್ಯ ಅಡಗಿ
ಕುಂತ ಕಣ್ಣಲಿ
ನಡೆಯೋ ಕೊಡಲಿ, ಇವ ಎತ್ ಎತ್
ಒಗೆದರೆ ನರಕ ಕಣೋ
ಇವನು ಬಿಜಲಿ
ನವ ನಕ್ಷತ್ರ ಕಣೋ
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ

ಹೇಯ್ ಒಡೆಯ ಬಾ ಒಡೆಯ
ಹೇಯ್ ಒಡೆಯ ಬಾ ಒಡೆಯ
ಹೇಯ್ ಒಡೆಯ

ಹುಟ್ಟಿದಂತ ಊರ ಮಣ್ಣ
ಗಾಟ್ಟು ಕೋಪದಲ್ಲಿ
ಸತ್ಯ ಧರ್ಮಕಾಗೆ, ನಿಲ್ಲೋ ರಣಕಲಿ
ಬುದ್ದಿವಾದ ಹೇಳೋನಲ್ಲ
ಬಾಯಿ ಮಾತಿನಲ್ಲಿ
ಯಾರು ಎದ್ದೆ ಇಲ್ಲ ಇವನು,
ಕೊಟ್ಟ ಏಟಲಿ
ನಡಯೋ ಶಿಖರ
ಇವ ಗುಂಪಲ್ ನಡೆದರೂ ಹುಲಿಯ ತರ
ಇವನು ಚತುರ
ಇವ ಸಿಂಪಲ್ ನೇಸರ
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ

ಹೇಯ್ ಒಡೆಯ ಬಾ ಒಡೆಯ
ಹೇಯ್ ಒಡೆಯ ಬಾ ಒಡೆಯ
ಹೇಯ್ ಒಡೆಯ

ಕಾಣೆಯಾಗಿರುವೆ ನಾನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು
ಗಾಯಕೆ ಕುಡಿನೋಟ ಸಾಕು
ಮಾಯಿಸೋ ಒಡನಾಟ ಬೇಕು
ಮಾತಾಡುವ ದೇವರೇ ನೀನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ನಿನ್ನ ಕಿರುಬೆರಳ ತುದಿಯಲ್ಲಿ
ಕುಣಿಸು ನನ್ನ

ಸಣ್ಣ ಪರಿಮಳವ ಉಸಿರಲಿ
ಬೆರಸು ಚಿನ್ನ

ನೀನು ತೊಟ್ಟಿರುವ ಉಡುಪಿಗೂ
ಎಷ್ಟು ಜಂಬ

ನೀನು ಸಿಗದಿರಲು ಅಲೆಯುವೆ
ಊರ ತುಂಬಾ

ಪ್ರೀತಿಯ ಅವತಾರ ನೂರು

ತೋರುತ ನೀ ಸನಿಹ ಕೂರು

ಈ ಜೀವದ ಕಾಳಜಿ ನೀನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ನಿನ್ನ ನೆನಪುಗಳೇ ಮನಸ್ಸಿಗೆ
ಪಾರಿಜಾತ

ದಿವ್ಯ ನಸುನಗುವೆ ಕನಸಿನ
ಜಾಹಿರಾತ

ನೀನು ಕರೆದರೆ ನಾ ಬರುವೆನು
ಹಾಗೇನಿಲ್ಲ

ನಿನ್ನ ಜೊತೆಗಿರುವ ಕ್ಷಣಗಳೇ
ಜೋನಿಬೆಲ್ಲ

ವಾಸಿಸು ಕನಸಲ್ಲಿ ಬಂದು

ಪ್ರೀತಿಸು ಹೃದಯಾನೆ ನಿಂದು

ಓ ನೀನಿಲ್ಲದೆ
ತಬ್ಬಲಿ ನಾನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ಕಾಣೆಯಾಗಿರುವೆ ನಾನೂ
ಎದುರಲಿ ಕಾಣುತಿರುವಾಗ ನೀನು

ಶ್ಯಾನೆ ಲವ್ ಆಗೋಯ್ತಲ್ಲೆ

ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ

ನಾನು ನಂಜಿ, ನೀನು ನನ್ನ ನಂಜ
ಬಾರೋ ಬಾರಿಸೋಣ ಬ್ಯಾಂಡು ಬಾಜ

ಅಂದಾನ ಆಸೇನ ಬಚ್ಚಿಡೋಕಾಗತ್ತ
ಬಚ್ಚಿಟ್ರೆ ಪರ್ಪಂಚ, ಮುಂದಕ್ಕೆ ಹೋಗತ್ತ
ಬಾರಮ್ಮಿ ಬಾರೆ ಇತ್ತ ಆ ಆ ಆ

ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ

ಕನಸಲ್ಲಿ ಬಂದ್ಬುಟ್ಟು, ಕಣ್ಣಲ್ಲಿ ಕಣ್ಣಿಟ್ಟು
ಕೈ ಹಿಡಿದು ಎಳದಲ್ಲೋ ನಂಜಾ

ನಂಜ ನಂಜ ನಂಜ ಅಂತ, ಕೊಡ್ತಿಯಲ್ಲೇ ಮಾಂಜ
ಮುಂಜಾನೆ ಮಂಜಲ್ಲಿ, ಮಾರ್ನೌಮಿ ಹಬ್ದಲ್ಲಿ
ಮುತ್ತ್ಕೊತ್ತು ಓಡೋದೆ ನಂಜಿ

ನಂಜಿ ನಂಜಿ ನಂಜಿ ಅಂತ, ದೂರ ನಿಂತೆ ಅಂಜಿ

ಪಲ್ಲಕ್ಕಿ ಪಲ್ಲಕ್ಕಿ, ಹೊರ್ತೀನಿ ನಾ ನಿಂಗೆ

ಹಾಲಕ್ಕಿ ಹಾಲಕ್ಕಿ, ನುಡಿದೈತೆ ಶುಭಾವಾಗೆ

ಬಚ್ಚಿಟ್ಟು ಮುಚ್ಚಿಟ್ಟು ಉಪಯೋಗ ಇಲ್ಲಮ್ಮಿ
ಪ್ರೀತೀನ ಬಿಚ್ಚಿಟ್ಟು ಹೇಳ್ತೀನಿ ಬಾರಮ್ಮಿ
ಬೇಗಾನೆ ಬಾರೆ ನಂಜಿ

ಶ್ಯಾನೆ ಲವ್ ಆಗೋಯ್ತಲ್ಲೇ, ನಂಜಿ
ಇಲ್ಲೇ ಸಿಗೋಣ್ವೆನೆ ನಾಳೆ ಸಂಜಿ

ನನ್ನಂತ ಖಡಕ್ಕು ರೊಟ್ಟಿಗೆ
ನಿನ್ನಂತ ಜವಾರಿ ಬೆಣ್ಣೆನೆ ಬೇಕು

ಬೇಕು ಬೇಕು ಬೇಕು ಅಂತ, ಇನ್ನು ಯಾಕೆ ಬ್ರೇಕು
ಮುದ್ದಾಡು ಮುದ್ದಾಡು, ಮೂರೊತ್ತು ಮುದ್ದಾಡು
ನಿಂದೇನೆ ಮೈಸೂರು ಪಾಕು

ಪಾಕು ಪಾಕು ಪಾಕು ನಿನ್ನ, ಮುಟ್ಟಿದರೆ ಏನೋ ಶಾಕು

ಅಮ್ಮಮ್ಮೋ ಅಮ್ಮಮ್ಮೋ
ಏನೇನೊ ಅಯ್ತೀಗ

ಜುಮ್ಮಮ್ಮೋ ಜುಮ್ಮಮ್ಮೋ
ನಿನ್ನನ್ನು ಸೋಕಾಗ

ನಿನ್ನಂತ ಹೈದನ್ನ ನಾನೆಲ್ಲೂ ನೋಡಿಲ್ಲ
ಇವತ್ತು ಆದಂಗೆ ಯಾವತ್ತು ಆಗಿಲ್ಲ
ನೋಡಿತ್ತ ಇನ್ನೊಂದ್ ಸಲ

ಶ್ಯಾನೆ ಲವ್ ಆಗೋಯ್ತಲ್ಲೋ, ನಂಜ
ಬಾರೋ ಬಾರಿಸೋಣ ಬ್ಯಾಂಡು ಬಾಜ

ಮಳವಳ್ಳಿ ಮಾವನ ಮಗನೆ

ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ

ಬಂದ್ರು ಬಂದ್ರು ನೋಡೊ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್

ನಮ್ಮದೇ ಹುಡ್ಗಿ ರೇಷ್ಮೆ ಸೀರೆ ಉಟ್ಟರೆ
ಹೆಂಗಿದೆ ಅಂಥ ಸನ್ನೆ ಮಾಡಿ ಬಿಟ್ಟರೆ
ಬಡಪಾಯಿ ಈ ಜೀವ
ತಡ್ಕೊಳ್ಳೊದ್ ಹೆಂಗ್ ಹೇಳ್ರಪ್ಪೊ

ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ

ತೇರು ನೋಡುತಿಲ್ಲ
ಯಾಕೋ ನನ್ನೇ ನೋಡುತೀಯ

ತೇರಿಗಿಂಗ ನೀನೆ ತುಂಬ ಚೆನ್ನಾಗ್ ಕಾಣುತೀಯ

ಗುಂಪಿನಲ್ಲಿ ಯಾಕೆ
ಹಿಂಗೆ ತಂಟೆ ಮಾಡುತೀಯ

ಸುಮ್ಮನೆ ಇದ್ದರೆ ಕಣ್ಣಿನಲ್ಲೆ ಕೊಲ್ತೀಯ

ಮಾವನ್ ಮಗನೇ
ಮಳವಳ್ಳಿ ಮಾವನ್ ಮಗನೇ

ಎಷ್ಟು ಚೆಂದ ಎಲ್ಲ ಮಾಯ
ಆಗಿಬಿಟ್ಟರೆ
ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೆ
ಟೆಂಟಿನಲ್ಲಿ ಅಂಟಿ ಕೂತು ಮ್ಯಾಟ್ನಿ ಪಿಚ್ಚರು
ಹಾಯಾಗಿ ನೋಡೋನ್ ಬಾರೆ

ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ

ಮುತ್ತಿನಂತ ಅಳಿಯ ಸಿಕ್ಕ
ನಮ್ಮ ಊರಿಗೊಬ್ಬ
ಚಂದವಾಯ್ತು ನೀನು ಬಂದು
ನಮ್ಮ ಊರ ಹಬ್ಬ

ಬೀದಿಗೆಲ್ಲ ಕಟ್ಟಿ
ಜಲ್ಲಿ ಕಬ್ಬು ಬಾಳೆ ಕಂಬ
ಸ್ವಾಗತ ಕೋರುತ
ಆರತೀಯ ಎತ್ತು ಬಾ

ನಮ್ಮೂರ್ ಒಡೆಯ ನೀನಿನ್ನು
ನಮ್ಮೂರ್ ಒಡೆಯ

ನಿಮ್ಮ ಪ್ರೀತಿ ಕಂಡು ನಾನು
ಧನ್ಯನಾದೆನು
ನಾನು ಬೆರೆಯಲ್ಲ ಇನ್ನು
ನಿಮ್ಮಲೊಬ್ಬನು

ಪ್ರಾಣ ಇರುವ ತನಕ ಎಂದು
ಮರೆಯಲಾರೆನು
ಈ ನಿಮ್ಮ ಅಭಿಮಾನವ

ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close