ಕ.com ಯೂಟ್ಯೂಬ್ ಚಾನಲ್

ಕೆ.ಜಿ.ಎಫ್. ಚಲನಚಿತ್ರದ ಜನಪ್ರಿಯ ಡೈಲಾಗ್-ಗಳ ಸಾಹಿತ್ಯ

ಕೆ.ಜಿ.ಎಫ್. ಚಲನಚಿತ್ರದ ಜನಪ್ರಿಯ ಡೈಲಾಗ್-ಗಳ ಸಾಹಿತ್ಯ. ಕೆಜಿಎಫ್ ಅಧ್ಯಾಯ ೧ ೨೦೧೮ರಲ್ಲಿ ಬಿಡುಗಡೆಯಾದ ಭಾರತೀಯ ಕನ್ನಡ ಚಲನಚಿತ್ರ. ಇದನ್ನು ಮೂಲ ಭಾಷೆಯಿಂದ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಧ್ವನಿಪಥದೊಂದಿಗೆ(ಡಬ್ ಮಾಡಿ) ಬಿಡುಗಡೆ ಮಾಡಲಾಯಿತು. ಚಲನಚಿತ್ರವನ್ನು ಉಗ್ರಂ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರು ಬರೆದು ನಿರ್ದೇಶಿಸಿದ್ದಾರೆ ಮತ್ತು ಹೋಂಬಾಳೆ ಚಲನಚಿತ್ರಗಳ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದಾರೆ.

ಕೆ.ಜಿ.ಎಫ್. ಡೈಲಾಗ್-ಗಳ

——–

17 ಸಾವಿರ ವರ್ಷದ ಯುದ್ಧದ ಇತಿಹಾಸದಲ್ಲಿ ಕದನಗಳೆಷ್ಟೋ ನಡೆದಿದೆ. ಎಷ್ಟೋ ನೆತ್ತರ ಹರಿದಿದೆ. ಆದರೆ, ನಮ್ಮ ನೆನಪಿನಲ್ಲಿ ಉಳಿಯುವವರು ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು, ಇವನು ಅವೆರಡು ಮಾಡಿದ್ದಾನೆ.

——–

ವಿಧಿಯ ಕೈವಾಡ ಆ ದಿನ ಎರಡು ಘಟನೆ ನೆಡಿತು, ಆ ಜಾಗನು ಹುಟ್ಟಿತು, ಅವನು ಹುಟ್ಟಿದ.

——–

ಹೊರಟ, ಅವನಿಗೆ ಹೋಗುತ್ತಿದ್ದ ದಾರಿ ಬಗ್ಗೆ ಗೊತ್ತಿಲಿಲ್ಲ. ತಲುಪುವ ಜಾಗದ ಬಗ್ಗೆ ಗೊತ್ತಿರಲಿಲ್ಲ. ಅದರ ಅಮಾನುಷ ಚರಿತ್ರೆ ಬಗ್ಗೆನೂ ಗೊತ್ತಿರಲಿಲ್ಲ.

——–

ಒಂದು ಹೊಟೆದಾಟದಲ್ಲಿ ಯಾರು ಮೊದಲು ಹೊಡುದ್ರು ಎನ್ನುವುದು ಲೆಕ್ಕಕ್ಕೆ ಬರಲ್ಲ. ಯಾರ್ ಮೊದಲು ಕೆಳಗೆ ಬಿದ್ರು ಅನ್ನೊದೇ ಲೆಕ್ಕಕ್ಕೆ ಬರೋದು.

——–

ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ಸ್ಟರ್ ಇವನು ಒಬ್ಬನೋ ಬರೋದು ಮಾನ್ಸ್ಟರ್.

——–

ನನಗೆ ಒಂದ್ ಮಾತು ಕೊಡು, ನೀನು ಹೇಗೆ ಬದುಕ್ತಿಯಾ ಅಂತ ನನಗೆ ಗೊತ್ತಿಲ್ಲ. ಆದರೆ, ನೀನು ಸಾಯುವಾಗ ಪ್ರಬಲನಾಗಿ, ದೊಡ್ಡ ಶ್ರೀಮಂತನಾಗಿ ಸಾಯಬೇಕು.

——–

ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ.

——–

ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ.

——–

ಬಾಂಬೆ ಏನು ನಿಮ್ಮಪ್ಪಂದಾ? ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ.

——–

ಪವರ್ ಫುಲ್ ಫೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್.

——–

ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯುವರ್ ಡ್ಯಾಡ್.

——–

ಇನ್ಮೇಲೆ ಅವರಪ್ಪ ನನ್ನ ಮಾವ, ನಾನು ನಿಮ್ಮೆಲ್ಲರಿಗೂ ಭಾವ, ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ.

——–

ಎಲ್ಲ ಸಿನಿಮಾಗಳಲ್ಲಿಯೂ ಒಬ್ಬ ಇರ್ತಾನಂತಲ್ಲ ನಿನ್ನುನ್ನ ನೋಡಿದ್ರೆ ಹಾಗೆ ಅನ್ಸುತ್ತೆ, ಯಾರು ಹೀರೋ ನಾ ?, ಅಲ್ಲ ವಿಲನ್.

——–

ಭಾವನೆಗಳಿಗೆ ಓಳಗಾಗಬೇಡ, ಇಲ್ಲಿ ಅದಕ್ಕೆ ಬೆಲೆ ಇಲ್ಲ. ಎದೆಯಲ್ಲಿ ಕಲ್ಲು ಇದ್ದವನಿಗೆ ಇದೆಲ್ಲ ಅಂಟೋದಿಲ್ಲ.

——–

ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು. ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು.

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close